Monday 6 August 2018

ಸಂಸ್ಕೃತ ಚಾಟುಪದ್ಯ

ಗ್ರಹಣದ ಸಮಯಕ್ಕೆ ನೆನಪಾದ ಸಂಸ್ಕೃತದ ಪ್ರಸಿದ್ಧ ಚಾಟುಪದ್ಯ -

ಪ್ರವಿಶ ಝಟಿತಿ ಗೇಹಂ ಮಾ ಬಹಿಸ್ತಿಷ್ಠ ಕಾಂತೇ
ಗ್ರಹಣಸಮಯವೇಲಾ ವರ್ತತೇ ಶೀತರಶ್ಮೇಃ ।
ಅಯಿ ಸುವಿಮಲಕಾಂತಿಂ ವೀಕ್ಷ್ಯ ನೂನಂ ಸ ರಾಹುಃ
ಗ್ರಸತಿ ತವ ಮುಖೇಂದುಂ ಪೂರ್ಣಚಂದ್ರಂ ವಿಹಾಯ ॥

ನನ್ನ ಸದ್ಯದ ಪದ್ಯಾನುವಾದ -

ಆಲಯವ ಹೊಗು ಬಾರೆ ಹೊರನಿಲ್ಲದಿರು ನೀರೆ
ವೇಳೆಯಾದುದು ಚಂದ್ರನ ಗ್ರಹಣಕೆ ।
ಕಾಳರಾಹುವು ಕಂಡರೀ ನಿನ್ನ ಪೆರೆಮೊಗವ
ಕೂಳು ಮಾಡುವನಿದನೆ ಬಿಡುತ ವಿಧುವ :-)

ಪೆರೆಮೊಗ = ಚಂದ್ರಮುಖ, ಚಂದ್ರನಂತಿರುವ ಮುಖ.